ಒಂದು ಕಡೆ ಕೊರೋನಾ ಅಟ್ಟಹಾಸ ಮುಂದುವರೆದಿದ್ದರೆ, ಮತ್ತೊಂದುಕಡೆ ಜನ ಜೀವನವು ಅದರೊಂದಿಗೆ ಏಗುತ್ತಲೇ ಸಹಜತೆಯ ಕಡೆ ಹೆಜ್ಜೆ ಹಾಕಲು ಶ್ರಮಿಸುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರು ಮಕ್ಕಳ ಆರೋಗ್ಯ ಅಥವಾ ಮಕ್ಕಳ ಭವಿಷ್ಯ ಇವೆರಡರಲ್ಲಿ ಯಾವುದು ಮುಖ್ಯ ಹಾಗೂ ಯಾವುದು ತಮ್ಮ ಆಯ್ಕೆ ಎಂಬ ಗೊಂದಲದಲ್ಲಿ ಸಿಲುಕಿರುವಾಗಲೇ ವಿದ್ಯಾರ್ಥಿಗಳ ಜೀವನದಲ್ಲಿ ಅತಿ ಮುಖ್ಯ ಘಟ್ಟವಾದ SSLC ಪರೀಕ್ಷೆಗಳು ಘೊಷಣೆಯಾಗಿವೆ.
ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಇರುವ ನಮ್ಮ ಶಿಲ್ಪಾ ಫೌಂಡೇಶನ್ ವತಿಯಿಂದ ಕೋರೋನಾ ಹರಡುವ ಮೊದಲೇ ಸಂಸದ ತೇಜಸ್ವಿ ಸೂರ್ಯ ಅವರ BEST ಜತೆಗೂಡಿ ಲಕ್ಷಾಂತರ ರೂ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿತ್ತು
ಇದೀಗ ಕೊರೋನಾ ಸೋಂಕಿನ ಗೊಂದಲದ ನಿವಾರಣೆಗಾಗಿ ಬಿಬಿಎಂಪಿಯವರ ಸಹಯೋಗದೊಂದಿಗೆ ನಮ್ಮ ಫಿಡಿಲಿಟಸ್ ಕಾರ್ಪ್ ಸಂಸ್ಥೆಯ Fumigation ವಿಭಾಗದ ಪರಿಣಿತರ ತಂಡವು ಸೋಂಕು ಮುಕ್ತಗೊಳಿಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿಯಂತ್ರಣಗಳನ್ನು ಸಿಂಪಡಿಸುವ ಕಾರ್ಯವನ್ನು ನಿರ್ವಹಿಸಿದೆ.
ಈ ಸಂದರ್ಭದಲ್ಲಿ ಪೋಷಕರು ಮಕ್ಕಳಲ್ಲಿ ಪರೀಕ್ಷೆ ಹಾಗೂ ಕೊರೋನಾದ ಬಗ್ಗೆ ಮನೋಸ್ಥೈರ್ಯವನ್ನು ತುಂಬುವ ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಸಹ ವಿದ್ಯಾರ್ಥಿಗಳ ಜೊತೆ ಅಂತರವನ್ನು ಕಾಪಾಡಿಕೊಳ್ಳುವ, ಅನಗತ್ಯವಾಗಿ ಯಾವುದೇ ವಸ್ತುಗಳನ್ನು ಮುಟ್ಟದಿರುವ ಹಾಗೂ ತಮ್ಮ ಸುರಕ್ಷೆಯ ಕಡೆ ತಾವೇ ಗಮನಹರಿಸುವ ಬಗ್ಗೆ ತಿಳಿಸಿ ಹೇಳಬೇಕು.
ಪರೀಕ್ಷೆ ಬರೆಯುತ್ತಿರುವ ಎಲ್ಲ ಮಕ್ಕಳಿಗೆ ಶುಭಾಶಯಗಳು. ಶ್ರದ್ಧೆಯಿಂದ, ಸಮಾಧಾನದಿಂದ ಯಾವ ಒತ್ತಡವಿಲ್ಲದಂತೆ ಪರೀಕ್ಷೆ ಬರೆಯಿರಿ. ಪರೀಕ್ಷೆಯಲ್ಲಿ ಮಾತ್ರವಲ್ಲ, ನಿಮ್ಮ ಇಡೀ ಜೀವನದಲ್ಲಿ ನಿಮಗೆ ಯಶಸ್ಸು ದೊರೆಯಲಿ
The COVID-19 on the one hand has been terrorizing people by spreading rapidly, upsetting the life of the people and people have been continuing to bear this brunt with patience.
All this at a time, when the parents of the children are more concerned and worried about the safety, health and future of their children, passing through a dilemma as to what should be their option for their wards. Also for the children it is their turning point in life to take up their first public exam.
Team Fidelitus Corp has been always involved in supporting especially the Government school students, through Shilpa Foundation along with BEST (Bengaluru South Education & Social Transformation, an initiative from Bangalore South M.P. Mr. Tejasvi Surya), have reached out in supporting the children for having the relevant text/ gude books for their studies.
Now, that the COVID-19 pandemic problems looks enormous, Fidelitus Corp’s Fumigation team, on the beck and call of the BBMP, have on a war footing worked effectively in sanitizing all the SSLC Exam center’s in Bengaluru, right from the class rooms to the rest rooms, by spanning out teams, to ensure that the children can take up the crucial examination without the fear of the pandemic COVID 19..
Fidelitus Corp’s family wishes all the best for all the children who have prepared well over the days for these exams peacefully without any tensions of the problems around them, also suggesting to maintain the social distancing, being careful in whatever they do, not only for now, but also for their future life.