You are currently viewing Abolition of COVID-19 is all Our Responsibility: Achuth Gowda,MD Fidelitus Corp (ಕೊರೋನಾ ನಿರ್ಮೂಲನೆ ನಮ್ಮೆಲ್ಲರ ಹೊಣೆ: ಅಚ್ಚುತ್ ಗೌಡ, ಎಂಡಿ-ಫಿಡಿಲಿಟಸ್ ಕಾರ್ಪ್)

Abolition of COVID-19 is all Our Responsibility: Achuth Gowda,MD Fidelitus Corp (ಕೊರೋನಾ ನಿರ್ಮೂಲನೆ ನಮ್ಮೆಲ್ಲರ ಹೊಣೆ: ಅಚ್ಚುತ್ ಗೌಡ, ಎಂಡಿ-ಫಿಡಿಲಿಟಸ್ ಕಾರ್ಪ್)

ಇದೊಂದು ವಿಚಿತ್ರ ಸನ್ನಿವೇಶ. ಇದಕ್ಕೆ ಇಡೀ ಜಗತ್ತು ನಲುಗಿ ಹೋಗಿದೆ. ಇಡೀ ಭೂ ಮಂಡಲವೇ ತಮ್ಮ ಅಪ್ಪಣೆಯ ಮೇಲೆ ನಿಂತಿದೆ ಎಂದು ಕೊಂಡಿದ್ದ ಹಲವಾರು ದೈತ್ಯ ದೇಶಗಳು, ಸಂಸ್ಥೆಗಳು, ವ್ಯಕ್ತಿಗಳು ಕಣ್ಣಿಗೆ ಕಾಣದ ಯಕ್ಕಶ್ಚಿತ್ ವೈರಾಣುವಿನಿಂದ ಹೈರಾಣಾಗಿವೆ.

ಮೊದಲೇ ಹೆದರಿದ್ದವರಿರಲಿ, ಅದೊಂದು ಕ್ಷುಲ್ಲಕ ವಿಷಯವೆಂದು ತಿಳಿದು ತಲೆ ಕೆಡಿಸಿಕೊಳ್ಳದವರೂ ಸಹ ಇಂದು ಗಂಭೀರವಾಗಿ ಯೋಚಿಸುವಂತೆ ಮಾಡಿರುವ ಕೋವಿಡ್ ೧೯ ಎಂಬ ಕೊರೋನಾ ವೈರಸ್ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗು ಮಾನಸಿಕವಾಗಿ ಮಾಡುತ್ತಿರುವ ಪರಿಣಾಮ ಹಾಗು ಅನಾಹುತ ದೈಹಿಕ ಆರೋಗ್ಯದ ಮೇಲೆ ಆಗುವುದಕ್ಕಿಂತ ಎಷ್ಟೋ ಹೆಚ್ಚಿನದು.

ಜನಸಾಮಾನ್ಯರ ಬದುಕು ದುರ್ಭರವಾಗುತ್ತಿರುವ ಇಂತಹದ್ದೊಂದು ವಿಷಮ ಪರಿಸ್ಥಿತಿಯಲ್ಲಿ ಕಾರ್ಪೊರೇಟ್ ರಿಯಲ್ ಎಸ್ಟೇಟ್ಟ, ಇಂಟೀರಿಯರ್ ಡೆಕೋರೇಷನ್ ಟೀಮ್, ಕಾರ್ಪೊರೇಟ್ ಮಾನವ ಸಂಪನ್ಮೂಲ ವಿಭಾಗ, ಫೆಸಿಲಿಟಿ ಮ್ಯಾನೇಜ್ಮೆಂಟ್ ಟೀಮ್ , ಫಿಡಿಲಿಟಸ್ ಗ್ಯಾಲರಿ ಮೊದಲಾದ ವಿಭಾಗಗಳನ್ನು ಹೊಂದಿರುವ ಫಿಡಿಲಿಟಸ್ ಕಾರ್ಪ್ ನಂತಹ ನೂರಾರು ಜನ ಕೆಲಸ ಮಾಡುತ್ತಿರುವ ಸಂಸ್ಥೆಯ ಮುಖ್ಯಸ್ಥನಾಗಿ ನನ್ನಂತಹವರ ಸವಾಲು ನಿಜಕ್ಕೂ ಕಠಿಣವೇ. ಆರ್ಥಿಕ ಹಿಂಜರಿತದ ತೀರ್ವತೆ ಒಂದೆಡೆಯಾದರೆ ಕುಟುಂಬದ ಸದಸ್ಯರಂತಿರುವ ಸಂಸ್ಥೆಯ ಉದ್ಯೋಗಿಗಳ ಹಿತರಕ್ಷಣೆ ಮತ್ತೊಂದೆಡೆ. ಇದೆಲ್ಲದರ ಜೊತೆ ಶಿಲ್ಪಾ ಫೌಂಡೇಶನ್ ನಂತಹ ಸಂಸ್ಥೆಯ ಸ್ಥಾಪಕನಾಗಿ ಸಾಮಾಜಿಕ ಕಾಳಜಿಯನ್ನು ತೋರ್ಪಡಿಸಬೇಕಾದ ಕರ್ತವ್ಯ.

ಬಹುತೇಕ ಹೊರಗಿನ ಕಾರ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ , ಕಾರ್ಪೊರೇಟ್ ರಿಯಲ್ ಎಸ್ಟೇಟ್ ನಂತಹ ಕ್ಷೇತ್ರದಲ್ಲಿ ನನನ್ನೂ ಸೇರಿ ಸಮರ್ಥ ಪರಿಣಿತರ ದಂಡೇ ನಮ್ಮ ಸಂಸ್ಥೆಯಲ್ಲಿದ್ದರೂ ಕೊರೋನಾ ಮಾರಿಯ ನೆಪದಲ್ಲಿ ಯಾರೂ ಯಾರನ್ನೂ ಭೇಟಿಯಾಗುತ್ತಿಲ್ಲ. ಅನಿವಾರ್ಯವಾಗಿ ಭೇಟಿ ಆಗಲೇ ಬೇಕಾದ ಸಂದರ್ಭದಲ್ಲಿ ಸಂಪೂರ್ಣ ಮುನ್ನೆಚ್ಚರಿಕೆ ತೆಗೆದುಕೊಳ್ಳಲು, ಭೇಟಿಯಾದವರ ಕೈ ಕುಲುಕದಂತೆ ಹಾಗು ದೈಹಿಕ ದೂರವನ್ನು ಕಾಯ್ದುಕೊಳ್ಳುವಂತೆ ನಮ್ಮ ಎಲ್ಲ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಕಚೇರಿಯ ಒಳ ಬರುವ ಮೊದಲು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಅನುವಾಗುವಂತೆ ಉತ್ತಮ ಗುಣಮಟ್ಟದ ಸ್ವಚ್ಛತಾ ದ್ರವಗಳನ್ನು ಒದಗಿಸಲಾಗಿದೆ.

ಕಾರ್ಪೊರೇಟ್ ಕ್ಷೇತ್ರಕ್ಕೆ ಮಾನವ ಸಂಪನ್ಮೂಲ ವನ್ನೊದಗಿಸುತ್ತಿರುವ ನಮ್ಮ (HR ) ವಿಭಾಗದಲ್ಲಿರುವ ಪರಿಣಿತರು ಮನೆಯಿಂದಲೇ ಕೆಲಸಮಾಡಬಹುದಾದುದರಿಂದ ನಮ್ಮ ಕಚೇರಿಯು ಸ್ವಲ್ಪ ಮಟ್ಟಿಗೆ ಖಾಲಿ ಎನ್ನಿಸುತ್ತಿದೆ.

ಮುಖ್ಯವಾಗಿ ಸದಾ ಒಬ್ಬರಲ್ಲ ಒಬ್ಬರು ಕಲಾ ಪ್ರೇಮಿಗಳ ಭೇಟಿಯಿಂದ ತುಂಬಿರುವ ನಮ್ಮ ಫಿಡಿಲಿಟಸ್ ಗ್ಯಾಲರಿಯ ಬಹು ಮುಖ್ಯವಾದ ಕಲಾಪ್ರದರ್ಶನವೊಂದನ್ನು ಸದ್ಯಕ್ಕೆ ರದ್ದು ಮಾಡಿ ಮುಂದೂಡಲಾಗಿದೆ ಹಾಗು ಕಲಾಸಕ್ತರು ಗುಂಪಾಗಿ ಕಲಾ ಗ್ಯಾಲರಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.

ಇನ್ನು ವಿವಿಧ ಸಂಸ್ಥೆಗಳಿಗೆ ಸೆಕ್ಯೂರಿಟಿ ಸೆರ್ವಿಸ್ ನಿಂದ ಹಿಡಿದು ಹೌಸ್ ಕೀಪಿಂಗ್, ಗಾರ್ಡನಿಂಗ್ ಮೊದಲಾದ ಕೆಲಸಗಳನ್ನು ನಿರ್ವಹಿಸುತ್ತಿರುವ ನಮ್ಮ ಫೆಸಿಲಿಟಿ ಮ್ಯಾನೇಜ್ಮೆಂಟ್ ಟೀಮ್ ನ ಜವಾಬ್ದಾರಿ ದೊಡ್ಡದಿದೆ. ಸಂಸ್ಥೆಗಳಿಗೆ ಭೇಟಿ ನೀಡುವ ಸಂದರ್ಶಕರನ್ನು ತಪಾಸಿಸುವುದರಿಂದ ಹಿಡಿದು ಸಂಪೂರ್ಣ ಸ್ವಚ್ತೆಯನ್ನು ಕಾಪಾಡುವ ಹೊಣೆಯನ್ನು ಎಂದಿಗಿಂತ ಹೆಚ್ಚಾಗಿಯೇ ನಿರ್ವಹಿಸಲಾಗುತ್ತಿದೆ.

ಅದೆಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಕಾಡುವುದು, ಯಾರು ಇದ್ದರು ಇಲ್ಲದಿದ್ದರೂ ನಾನೇ ನಿರ್ವಹಿಸಬೇಕಾದ ಕೆಲವು ಜವಾಬ್ದಾರಿಗಳಿಗೆ ಆಫೀಸನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. ಕೆಲವೊಮ್ಮೆ ಯಾರೂ ಇಲ್ಲದಾಗಲೂ ಅಥವಾ ಎಲ್ಲರಿಗಿಂತ ಮೊದಲು ಬಂದಾಗಲೂ
ಸೆಲ್ಯೂಟ್ ಮಾಡಿ ಸ್ವಾಗತಿಸುವ ಸೆಕ್ಯೂರಿಟಿ ಗಾರ್ಡ್ ಗಳು ಹಾಗು ಕಚೇರಿಯಲ್ಲಿ ನನ್ನ ಸಣ್ಣ ಪುಟ್ಟ ಬೇಕು ಬೇಡಗಳನ್ನು ನೋಡಿಕೊಳ್ಳುವ ನಮ್ಮ ಹುಡುಗ ಉಮೇಶ್ ಥಾಪಾ, ಇಂತವರ ಕೇವಲ ಸಂಬಳಕ್ಕಲ್ಲದ; ಅರ್ಪಣಾ ಮನೋಭಾವದ ಸೇವೆ ಕೂಡ ನನ್ನಲ್ಲಿ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುತ್ತಿರುತ್ತದೆ ಜೊತೆಗೆ ಕೃತಜ್ಞತೆಯನ್ನು ಹುಟ್ಟಿಸುತ್ತದೆ.

ಅದೇನೇ ಇರಲಿ ನಮ್ಮ ಪ್ರಧಾನ ಮಂತ್ರಿಯವರು ಭಾನುವಾರ ಸಂಪೂರ್ಣ ಜನತಾ ಕರ್ಫ್ಯೂ ಜಾರಿ ಮಾಡಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಅದಕ್ಕೆ ಸ್ಪಂದಿಸೋಣ. ಕೊರೋನಾ ಎಂಬ ಮಾರಿಯನ್ನು ಹೊರಗಟ್ಟೋಣ.

We can cite this one of its kind strange circumstance in our life time,. The entire world is in panic mode with junk contemplations, Various giant nations, organisations, and people who have accepted that the entire earth dwells on their order, have been vanquished by a unseen virus

In any event, for the individuals who may have been engrossed with the possibility that it was an inconsequential issue, the COVID-19(Corona Virus Disease 2019), which today makes individuals think genuinely, is substantially more than a social, economical, emotional and mental impact on the physical wellbeing.

The global recession sensing and normal challenges to run business due to economy slowdown, operating business verticals like corporate real estate transactions services, Project and interior designing, Facility Management Services, Human Resource Recruitment Services, is really challenge to all entrepreneurs like us and safeguarding Fidelitus family interest.

Our office is somewhat vacant as our most of the team members can telecommute from home. One of the most significant art exhibition of our Fidelitus Gallery, loaded up with art lovers’ visits was has been dropped and has been blocked.

In spite of the fact that we have a wide scope of capable experts in the field, for example, corporate real estate transactions team, who work in most outside work territories, nobody meets Corona as mammoth turn. The entirety of our staff individuals are encouraged to play it safe, far away for hand greets and keep up social distance when the inescapable visit is required. Premium hand cleansers are given to help clean hands before entering the any of clientl’s workplace.

Most Importantly, the workplace can’t get away from a portion of the obligations that we need to perform, paying little heed to who is available or not. As usually I been received by the security guards regularly toward the beginning of the day. when nobody is there or when every other person starts things out,Umesh Thapa, our proud boy who can be our enthusiastic person where commits towards his work normally not just for the pay check more than with bundle of joy and happiness. Serving with dedication additionally cautions me of obligation and imparts appreciation. We solute the team are still open, providing round the clock services, offices, hospitals, public places, many more even when closed down.

Sincerely i might wish to show gratitude towards my proud team like Security Guards, House Keeping, Design Staff & all ( and our most trustable office assistant like Umesh Thaapa as he taken a great responsibility by managing the current situation by serving his profession passionately)in multiple client facility. Where he is taking a tasks proudly and serving better for the team. Like him who are all performing on number of locations in Bengaluru with the schedule of 24/7. Thanking my people by giving best ever contribution to the respective client locations on this crisis time.

In spite of the remarkable difficulties, we are always open and accessible for your all requirements. We comprehend that in dubious occasions, our clients especially in Bengaluru need us far more, and that we have asked our record groups to be in normal contact with you. Don’t hesitate to attach with them whenever with questions or to ascertain how we are overseeing through the various issues that we are all are confronting a day.

Our experts, working connected at the hip with our respective clients within the Suburban areas, are discovering approaches to oversee through these troublesome days by altering meeting conventions, attending properties inspections within the division of transactions with littler gatherings and discovering approaches to continue pushing ahead. Simultaneously, we are sticking to significant general wellbeing limitations and suggestions.

Nevertheless, Our Prime Minister has requested for a complete Janata curfew on Sunday. Let us react to it as responsible citizens. Let’s get out of an unseen giant COVID-19.

Stay Safe

Stay Healthy !!!

Achuth Gowda , MRICS
Founder and Managing Director
Fidelitus Corp

Leave a Reply